ಆದಿಲಶಾಹಿ ಸಾಹಿತ್ಯ ಅನುವಾದ ಯೋಜನೆ 2018-08-09T10:19:59+00:00

ಆದಿಲ್ ಶಾಹಿ ಸಾಹಿತ್ಯ ಅನುವಾದ ಯೋಜನೆ

ವಿಜಯಪುರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆದಿಲ್ ಶಾಹಿ ಅರಸರು ಸುಮಾರು 200 ವರ್ಷ ದಕ್ಷಿಣ ಭಾರತದ ಬಹುಭಾಗವನ್ನು ಆಳಿದರು. ಶಿಲ್ಪ, ಸಾಹಿತ್ಯ ಕ್ಷೇತ್ರಗಳಿಗೆ ಅವರು ನೀಡಿದ ಕೊಡುಗೆ ಲೋಕಮಾನ್ಯವಾದದ್ದು.  ಆದಿಲ್ ಶಾಹಿ ಕಾಲದ ಪರ್ಶಿಯನ್ ಮತ್ತು ದಖನಿ ಉರ್ದು ಭಾಷೆಗಳಲ್ಲಿ ರಚಿತವಾದ ಸಾಹಿತ್ಯವನ್ನು ಕನ್ನಡದಲ್ಲಿ ತರಲು ಒಂದು ಪ್ರಸ್ತಾವನೆಯನ್ನು ಕೇಂದ್ರವು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ 2013ರಲ್ಲಿ ಸಲ್ಲಿಸಲಾಗಿತ್ತು. ಯೋಜನೆಗೆ ಇಲಾಖೆಯು ಅನುಮತಿ ನೀಡಿತು. ಅನುವಾದಗೊಳಿಸಲು ನಾಡಿನ ಶ್ರೇಷ್ಠ ಸಂಶೋಧಕರಾದ ಡಾ.ಎಂ.ಎಂ.ಕಲಬುರ್ಗಿ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಿತು. ಈ ಯೋಜನೆಯ ನಿರ್ದೇಶಕರಾಗಿ ಹಿರಿಯ ಸಾಹಿತಿ ಡಾ. ಕೃಷ್ಣ ಕೊಲ್ಹಾರಕುಲಕರ್ಣಿಯವರು ಕಾರ್ಯನಿರ್ವಹಿಸಿದರು. ಇದೀಗ ಯೋಜನೆ ಪೂರ್ತಿಗೊಂಡು 21 ಪುಸ್ತಕಗಳನ್ನು 18 ಸಂಪುಟಗಳಲ್ಲಿ ಪ್ರಕಟಿಸಲಾಗಿದೆ.

ಮುಂಬರುವ ಸಂಶೋಧಕರಿಗೆ ಉಪಯುಕ್ತವಾಗುವಂತೆ ಆದಿಲ್ ಶಾಹಿ ಕಾಲದಲ್ಲಿ ರಚಿತವಾದ ಅನೇಕ ಪರ್ಶಿಯನ್, ದಖನಿ ಉರ್ದು ಹಸ್ತಪ್ರತಿಗಳನ್ನು, ಫರ್ಮಾನುಗಳನ್ನು, ಕೈಫಿಯತ್ತುಗಳನ್ನು ಸಂಗ್ರಹಿಸಿ ಇಡಲಾಗಿದೆ. ಜೊತೆಗೆ ಅತ್ಯಂತ ಅಂದಿನ ಹಳೆಯ ನಕಾಶೆಗಳನ್ನು ಸಂಗ್ರಹಿಸಿ ಇಡಲಾಗಿದೆ.