ಪ್ರಕಟಣೆಗಳು 2018-08-09T11:09:32+00:00

ಪ್ರಕಟಣೆಗಳು

ಡಾ. ಎಂ.ಎಂ. ಕಲಬುರ್ಗಿ ಸಮಗ್ರ ಸಾಹಿತ್ಯ ಪ್ರಕಟಣ ಯೋಜನೆ

ಡಾ. ಎಂ.ಎಂ. ಕಲಬುರ್ಗಿಯವರು ಸಾಹಿತ್ಯದ ಮೂಲಕ ನಾಡು, ನುಡಿ ಸೇವೆಗೈದು ದೇಶ-ವಿದೇಶದಲ್ಲಿ ದಟ್ಟವಾದ ಪ್ರಭಾವವನ್ನು ಬೀರಿದ ವ್ಯಕ್ತಿ. 20ನೇ ಶತಮಾನದ ಉತ್ತರಾರ್ಧದಲ್ಲಿ 21ನೇ ಶತಮಾನದ ಪೂರ್ವಾರ್ಧದ ಹೊಸ್ತಿಲಲ್ಲಿ ನಿಂತ ಮಹಾನ್ ವಿದ್ವಾಂಸ. ಸಂಶೋಧಕ, ವಿಮರ್ಶಕ, ಚಿಂತಕ ಹಾಗೂ ಸಾಹಿತ್ಯದ ಆರಾಧಕ.

ಇಂತಹ ಅಪರೂಪದ ವ್ಯಕ್ತಿಯ ವ್ಯಕ್ತಿತ್ವದ ಬಹುಮುಖಗಳನ್ನು ಒಂದೆಡೆ ಸೇರಿಸಿ ಇಡಿಯಾಗಿ ಸಮಗ್ರ ವ್ಯಕ್ತಿತ್ವವನ್ನು ಅಕ್ಷರ, ದೃಶ್ಯ, ಧ್ವನಿ, ಚಿತ್ರ ಮಾಧ್ಯಮಗಳ ಮೂಲಕ ಪರಿಚಯಿಸುವುದು. ಅಕ್ಷರ ಮಾಧ್ಯಮದಲ್ಲಿ ಬಂದ ಅವರ ಸಮಗ್ರ ಸಾಹಿತ್ಯವನ್ನು ವಿಷಯವಾರು ವಿಂಗಡಿಸಿ ಸಂಪುಟಗಳಲ್ಲಿ ಪ್ರಕಟಿಸುವ ಯೋಜನೆ ಕೇಂದ್ರ ಹಮ್ಮಿಕೊಂಡಿದ್ದು, ಇದಕ್ಕಾಗಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅನುದಾನ ನೀಡಿದೆ. ಕಾರ್ಯ ಪ್ರಗತಿಯಲ್ಲಿದೆ.

ಆದಿಲ್‍ ಶಾಹಿ ಸಾಹಿತ್ಯ ಅನುವಾದ ಯೋಜನೆ

ವಿಜಯಪುರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆದಿಲಶಾಹಿ ಅರಸರು ಸುಮಾರು 200 ವರ್ಷ ದಕ್ಷಿಣ ಭಾರತದ ಬಹುಭಾಗವನ್ನು ಆಳಿದರು. ಶಿಲ್ಪ, ಸಾಹಿತ್ಯ ಕ್ಷೇತ್ರಗಳಿಗೆ ಅವರು ನೀಡಿದ ಕೊಡುಗೆ ಲೋಕಮಾನ್ಯವಾದದ್ದು. ಆದಿಲ್ಶಾಹಿ ಕಾಲದ ಪರ್ಶಿಯನ್ ಮತ್ತು ದಖನಿ ಉರ್ದು ಭಾಷೆಗಳಲ್ಲಿ ರಚಿತವಾದ ಸಾಹಿತ್ಯವನ್ನು ಕನ್ನಡದಲ್ಲಿ ತರಲು ಒಂದು ಪ್ರಸ್ತಾವನೆಯನ್ನು ಕೇಂದ್ರವು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕøತಿ ಇಲಾಖೆಗೆ 2013ರಲ್ಲಿ ಸಲ್ಲಿಸಲಾಗಿತ್ತು. ಯೋಜನೆಗೆ ಇಲಾಖೆಯು ಅನುಮತಿ ನೀಡಿತು. ಅನುವಾದಗೊಳಿಸಲು ನಾಡಿನ ಶ್ರೇಷ್ಠ ಸಂಶೋಧಕರಾದ ಡಾ.ಎಂ.ಎಂ.ಕಲಬುರ್ಗಿ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಿತು. ಈ ಯೋಜನೆಯ ನಿರ್ದೇಶಕರಾಗಿ ಹಿರಿಯ ಸಾಹಿತಿ ಡಾ. ಕೃಷ್ಣ ಕೊಲ್ಹಾರಕುಲಕರ್ಣಿಯವರು ಕಾರ್ಯನಿರ್ವಹಿಸಿದರು. ಇದೀಗ ಯೋಜನೆ ಪೂರ್ತಿಗೊಂಡು 21 ಪುಸ್ತಕಗಳನ್ನು 18 ಸಂಪುಟಗಳಲ್ಲಿ ಪ್ರಕಟಿಸಲಾಗಿದೆ.

ಮುಂಬರುವ ಸಂಶೋಧಕರಿಗೆ ಉಪಯುಕ್ತವಾಗುವಂತೆ ಆದಿಲ್ ಶಾಹಿ ಕಾಲದಲ್ಲಿ ರಚಿತವಾದ ಅನೇಕ ಪರ್ಶಿಯನ್, ದಖನಿ ಉರ್ದು ಹಸ್ತಪ್ರತಿಗಳನ್ನು, ಫರ್ಮಾನುಗಳನ್ನು, ಕೈಫಿಯತ್ತುಗಳನ್ನು ಸಂಗ್ರಹಿಸಿ ಇಡಲಾಗಿದೆ. ಜೊತೆಗೆ ಅತ್ಯಂತ ಅಂದಿನ ಹಳೆಯ ನಕಾಶೆಗಳನ್ನು ಸಂಗ್ರಹಿಸಿ ಇಡಲಾಗಿದೆ.

ಕೇಂದ್ರದ ಪ್ರಕಟಣೆಗಳು

 1. ಡಾ. ಫ.ಗು.ಹಳಕಟ್ಟಿ 15 ಸಮಗ್ರ ಸಂಪುಟಗಳು-ಸಂಪಾದನೆ – 2007
 2. ಆದಿಲ್‍ ಶಾಹಿ ಸಾಹಿತ್ಯ ಅನುವಾದ- 18 ಸಂಪುಟಗಳು-2018
 3. ಡಾ.ಫ.ಗು.ಹಳಕಟ್ಟಿಯವರ ಶಿವಾನುಭವ ಪತ್ರಿಕೆಯ ಲೇಖನ ಸೂಚಿ-ಡಾ. ಎಸ್.ಆರ್.ಗುಂಜಾಳ -2002
 4. Vachanas of Sri Basaveswara-Translated by Dr. P.G.HALAKATTI Edited by – Dr. C.R.YARAVINTELIMATH – 2003
 5. ಬಿ.ಎಲ್.ಡಿ.ಇ.ಸಂಸ್ಥೆ – ಡಾ. ಎಂ.ಎಸ್.ಮದಭಾವಿ – 2003
 6. ಅಮೋಘಸಿದ್ಧ ಪರಂಪರೆ – (ಪಿಎಚ್.ಡಿ. ಸಂಶೋಧನ ಮಹಾಪ್ರಬಂಧ) – ಡಾ.ಚನ್ನಪ್ಪ ಕಟ್ಟಿ – 2012
 7. ಚಿಕ್ಕೋಡಿ ಕುಟುಂಬ – ಒಂದು ಅಧ್ಯಯನ (ಪಿಎಚ್.ಡಿ. ಸಂಶೋಧನ ಮಹಾಪ್ರಬಂಧ) –  ಡಾ.ಅಕ್ಕಿ ಉಮಾ ಕೊಟ್ರಪ್ಪ – 2012
 8. ವಿದ್ಯಮಾನ ಪತ್ರಿಕೆ (ತ್ರೈಮಾಸಿಕ)
 9. ರಾ.ಬ.ಫ.ಗು.ಹಳಕಟ್ಟಿ ಸಂಪಾದಿತ ಅಂಬಿಗರ ಚೌಡಯ್ಯನ ವಚನಗಳು-ಪರಿಷ್ಕರಣ- ಡಾ.ಎಸ್.ಕೆ.ಕೊಪ್ಪಾ – 2013
 10. ಗುರುಬಸಪ್ಪ ಫಕೀರಪ್ಪ ಹಳಕಟ್ಟಿ ಆತ್ಮಚರಿತ್ರೆ – ಗುರುಬಸಪ್ಪ ಹಳಕಟ್ಟಿ – 2013
 11. ಬಸವಣ್ಣನವರ ವಿಕಾಸಶೀಲ ವಚನಗಳು
 12. THE GILDED AND THE FADED
 13. ಸಾತ್ವಿಕ ಶಕ್ತಿಯ ನಾಯಕ ಶ್ರೀ ಬಿ.ಎಂ. ಪಾಟೀಲ-2015
 14. ವಚನಪಿತಾಮಹ ಶರಣ ಡಾ. ಫ.ಗು. ಹಳಕಟ್ಟಿ (ಪರಿಚಯ ಪತ್ರ)
 15. ಆದಿಲ್‍ ಶಾಹಿ ಅನುವಾದ ಯೋಜನೆ (ಪರಿಚಯ ಪತ್ರ)
 16. ಉಪ್ಪಲದಿನ್ನಿಯ ಸಂಗಮನಾಥ
 17. ಸಾಂಸ್ಥಿಕ ಪ್ರಜ್ಞೆ- ಡಾ. ಎಂ.ಎಂ. ಕಲಬುರ್ಗಿ-2015
 18. ಸಿದ್ಧರಾಮೇಶ್ವರ ವಚನಗಳು- ರಾ.ಬ. ಡಾ. ಫ.ಗು. ಹಳಕಟ್ಟಿ ಅವರ ಸಂಪಾದಿತ ಕೃತಿ 2016
 19. ಮಹಾದೇವಿಯಕ್ಕನ ವಚನಗಳು –ರಾ.ಬ. ಡಾ. ಫ.ಗು.ಹಳಕಟ್ಟಿ ಅವರ ಸಂಪಾದಿತ ಕೃತಿ 2017
 20. ಲಿಂಗಾಯತ ಸ್ವತಂತ್ರ ಧರ್ಮ- ಡಾ. ಎಂ.ಎಂ.ಕಲಬುರ್ಗಿ-2017
 21. Pandit Jawaharlal Neharu ‘A Tribute’