ಭೇಟಿ ನೀಡಿರುವ ಗಣ್ಯರು 2018-08-09T11:29:59+00:00

ಭೇಟಿ ನೀಡಿರುವ ಗಣ್ಯರು

ಸಂಶೋಧನ ಕೇಂದ್ರಕ್ಕೆ ನಾಡಿನ, ಹೊರನಾಡಿನ ಮಠಾಧೀಶರು, ಹಿರಿಯ ಸಾಹಿತಿಗಳು, ಗಣ್ಯ ನಾಗರಿಕರು, ರಾಜಕೀಯ ಮುಖಂಡರು ಭೇಟಿ ನೀಡಿ, ತಮ್ಮ ಸಂದರ್ಶನದಲ್ಲಿ ಮೆಚ್ಚುಗೆಯ ಮಾತುಗಳನ್ನು ಬರೆದು ಪ್ರೋತ್ಸಾಹ ಹಾಗೂ ಪ್ರೇರಣೆ ನೀಡಿದ್ದಾರೆ. ಅವರಲ್ಲಿ ಶ್ರೀ ಸುತ್ತೂರು ಮಠಾಧೀಶರು, ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು, ಶ್ರೀ ಶಿವಕುಮಾರ ಮಹಾಸ್ವಾಮಿಗಳು, ಸಿದ್ಧಗಂಗಾ ಮಠ, ತುಮಕೂರು, ಶ್ರೀ ಸಿದ್ಧರಾಮ ಮಹಾಸ್ವಾಮಿಗಳು, ರುದ್ರಾಕ್ಷಿ ಮಠ, ಬೆಳಗಾವಿ, ಭಾಲ್ಕಿ ಶ್ರೀಗಳು, ಶ್ರೀ ಮುರುಘಾಶರಣರು, ಚಿತ್ರದುರ್ಗ, ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮಿಗಳು, ನಿಡುಮಾಮಿಡಿ ಮೊದಲಾದ ಪೀಠಾಧೀಶರು, ನಾಡೋಜ ಪಾಟೀಲ ಪುಟ್ಟಪ್ಪ, ನಾಡೋಜ ಚನ್ನವೀರ ಕಣವಿ, ನ್ಯಾಯಮೂರ್ತಿ ವಿ.ಎಸ್.ಮಳೀಮಠ, ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ.ಗಿರೀಶ ಕಾರ್ನಾಡ, ವಿಮರ್ಶಕ ಡಾ. ಗುರುಲಿಂಗ ಕಾಪಸೆ, ಡಾ. ಎ.ಮುರಿಗೆಪ್ಪ, ಕುಲಪತಿಗಳು, ಕನ್ನಡ ವಿಶ್ವವಿದ್ಯಾಲಯ ಹಂಪಿ, ದಿ. ಎಂ.ಪಿ.ಪ್ರಕಾಶ, ಶ್ರೀ ಚಂದ್ರಕಾಂತ ಬೆಲ್ಲದ, ಶ್ರೀ ರಮೇಶಕುಮಾರ, ಶ್ರೀ ಎಚ್.ಕೆ.ಪಾಟೀಲ, ಶ್ರೀ ಅಶೋಕ ಹಾರನಹಳ್ಳಿ, ಶ್ರೀ ಎಸ್.ಆರ್.ನಾಯಕ, ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು, ಡಾ. ಮಲ್ಲಿಕಾ ಘಂಟಿ, ಕುಲಪತಿಗಳು, ಕವಿವಿ, ಹಂಪಿ ಶ್ರೀ ಸುರೇಶ ಹೆಬ್ಳಿಕರ, ಮಹಿಮಾ ಪಟೇಲ್, ಡಾ. ಮೀನಾ ಚಂದಾವರಕರ, ಕುಲಪತಿಗಳು ಮತ್ತು ಸಬಿಹಾ ಭೂಮಿಗೌಡ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ವಿಜಯಪುರ, ಶ್ರೀ ಆರ್.ಗೋಪಾಲ, ಮೈಸೂರು, ಶ್ರೀ ಶಿವಯೋಗಿ ಕಳಸದ, ಜಿಲ್ಲಾಧಿಕಾರಿಗಳು, ವಿಜಯಪುರ, ಡಾ. ಎಸ್.ಎಂ.ಜಾಮದಾರ, ಶ್ರೀ ಚಕ್ರವರ್ತಿ ಸೂಲಿಬೆಲೆ, ಶ್ರೀ ರಾಹುಲ್ ಎಂ. ಖರ್ಗೆ, ಡಾ. ಎಲ್.ಹನುಮಂತಯ್ಯ, ಶ್ರೀ ರಾಜಮೋಹನ ಗಾಂಧಿ, ದೆಹಲಿ, ಶ್ರೀ ಉಮಾಪತಿ, ನವದೆಹಲಿ, ಶಿವಾನಂದ ಇಂಗಳೇಶ್ವರ, ನವದೆಹಲಿ, ಡಾ. ಗಿರಡ್ಡಿ ಗೋವಿಂದರಾಜ, ಧಾರವಾಡ, ನ್ಯಾಯಾಧೀಶರುಗಳಾದ ಶ್ರೀ ಎಂ.ಎಂ.ಮಿರ್ದೆ, ಶ್ರೀ ಸದಾಶಿವ ಎಸ್. ಸುಲ್ತಾನಪುರ, ಶ್ರೀ ಎಸ್.ಕೆ.ಕುರಗೋಡಿ ವಿಜಯಪುರ ಇವರೆಲ್ಲರು ಪ್ರಮುಖರು.

ವಿದೇಶದಿಂದ ಡೊಮಿನಿಕ್ ಮ್ಯಾಕಲಿಸ್ಟರ್ ಬ್ರಿಟಿಷ್ ಹೈ ಕಮೀಶನರ್ ಬ್ಯಾಂಕಾಕ್, ಜೇಕ್ ಬೆನ್ಸಾನ್, ಲೆಡನ್ ಯೂನಿವರ್ಸಿಟಿ ಮತ್ತು ಕಿಲಾನ್ ಓರಟ್ಟಾನ ಉಲ್ಕಾ ಇವರು ಬೇಟಿ ನೀಡಿ ಪ್ರಶಂಸಿದ್ದಾರೆ.