ಸೌಕರ್ಯಗಳು 2018-08-09T11:15:02+00:00

ಸೌಕರ್ಯಗಳು

ಪ್ರಶಾಂತವಾದ ವಾತಾವರಣದಲ್ಲಿ ಕಟ್ಟಿದ ಸ್ಮಾರಕ ಭವನ. ಕಟ್ಟಡದ ಬಲಭಾಗದಲ್ಲಿ ಪೂಜ್ಯ ಹಳಕಟ್ಟಿಯವರ ಸಮಾಧಿ. ಅದರ ಹಿಂದೆ ಶ್ರೀ ಬಂಥನಾಳ ಶಿವಯೋಗಿಗಳ ಮಂದಿರ ಹಾಗೂ 770 ಅಮರ ಗಣಾಧೀಶ್ವರರ ಲಿಂಗದ ಗುಡಿ ಇದ್ದು. ಇದೊಂದು ಪವಿತ್ರ ಯಾತ್ರಾ ಸ್ಥಳವಾಗಿದೆ. ಇಲ್ಲಿ ಬರುವವರು ಶ್ರದ್ಧೆ, ಭಕ್ತಿಯಿಂದ ತಲೆಬಾಗಿ ನಮಸ್ಕರಿಸಿ ಬರುತ್ತಾರೆ. ಅಧ್ಯಯನಕ್ಕೆ ಬೇಕಾಗುವ ಸಕಲ ಸೌಲಭ್ಯಗಳನ್ನು ಬಹುತೇಕ ಪೂರೈಸಲಾಗಿದೆ. ಈ ಭವ್ಯ ಕಟ್ಟಡದಲ್ಲಿ ಅಧ್ಯಯನ ವಿಭಾಗದಲ್ಲಿ ಆಸನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, 24 ಗಂಟೆಗಳ ವಿದ್ಯುತ್ ಪೂರೈಕೆ, ಫ್ಯಾನ್ ಸೌಕರ್ಯ, ಧ್ವನಿವರ್ಧಕ ಸೌಲಭ್ಯವಿದೆ. ಕೂಡಲ ಸಂಗಮದ ಗ್ರಂಥಾಲಯದ ಮಾದರಿಯಲ್ಲಿಯ ಅಲ್ಮಾರಗಳಿವೆ. ವಿದ್ಯಾರ್ಥಿಗಳ ಜೊತೆಗೆ ಸಭೆ ನಡೆಸಲು ಒಂದು ಪ್ರತ್ಯೇಕವಾದ ಸಭಾಂಗಣ, ದೂರವಾಣಿ ಸೌಲಭ್ಯ (ನಂ. 08352-262770, ವಿಸ್ತರಣೆ-2320), ಕಂಪ್ಯೂಟರ್ ವ್ಯವಸ್ಥೆ, ಇಂಟರನೆಟ್ ಸೌಲಭ್ಯಗಳಿವೆ. ಹಳಕಟ್ಟಿಯವರು ಹೇಳಿದ, ಬರೆದಿಟ್ಟ ನುಡಿಮುತ್ತುಗಳ ಫಲಕಗಳಿವೆ. ಹಳಕಟ್ಟಿ ಅವರ ಜೀವನಕ್ಕೆ ಸಂಬಂಧಿಸಿದ ಭಾವಚಿತ್ರಗಳಿವೆ. ಹಳಕಟ್ಟಿ ಅವರ ಹಿತಚಿಂತಕ ಮುದ್ರಣಾಲಯದಲ್ಲಿದ್ದ ಮುದ್ರಣ ಯಂತ್ರವು ಕೇಂದ್ರದಲ್ಲಿ ಇದೆ. ಅಲ್ಲದೇ ಅವರು ಬಳಸುತ್ತಿದ್ದ ದೈನಂದಿನ ವಸ್ತುಗಳನ್ನೂ ಇಲ್ಲಿ ಸಂಗ್ರಹಿಸಲಾಗಿದೆ. ಇಷ್ಟೇ ಅಲ್ಲದೇ ಸಭೆ, ಸಮಾರಂಭಗಳಿಗಾಗಿ ಸುಮಾರು 300 ಜನ ಸೇರಬಹುದಾದ ಸಭಾಭವನವಿದೆ. ಕೇಂದ್ರದ ಎಲ್ಲ ಸಭೆಗಳೂ ಈ ಸಭಾಭವನದಲ್ಲಿಯೇ ನಡೆಯುತ್ತವೆ.