Home 2018-08-09T10:15:52+00:00

ವಚನಪಿತಾಮಹ ಡಾ.ಫ.ಗು.ಹಳಕಟ್ಟಿ

ವಚನಪಿತಾಮಹ ಡಾ.ಫ.ಗು.ಹಳಕಟ್ಟಿ ಕನ್ನಡನಾಡು ಕಂಡ ಅಪರೂಪದ ವ್ಯಕ್ತಿ-ಶಕ್ತಿ. ವಿಜಯಪುರದ ಪ್ರದೇಶವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡ ಅವರು ಅದರ ಸರ್ವತೋಮುಖ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತವರು. ಕಾಲಗರ್ಭದ ಕತ್ತಲೆಯಲ್ಲಿ ನಶಿಸಿಹೋಗುತ್ತಿದ್ದ ಬಸವಾದಿ ಶರಣರ ವಚನಗಳನ್ನು ಸಂಶೋಧಿಸಿ, ಪ್ರಕಟಿಸಿದ ಅಪ್ರತಿಮ ಸಂಶೋಧಕರು. ಅವರ 60 ವರ್ಷಗಳ ನಿರಂತರ ಶ್ರಮದ ಫಲವನ್ನು ಇಂದು ನಾವು ಸವಿಯುತ್ತಿದ್ದೇವೆ. ಮುಂದೆ ಓದಿ

ಡಾ. ಫ. ಗು. ಹಳಕಟ್ಟಿ ಸಂಶೋಧನಾ ಕೇಂದ್ರ, ಬಿಎಲ್‍ಡಿಇಎ ಸಂಸ್ಥೆಯ ಈಗಿನ ಅಧ್ಯಕ್ಷರು, ಶಿಕ್ಷಣಾಭಿಮಾನಿಗಳು, ಮಾಜಿ ಜಲಸಂಪನ್ಮೂಲ ಸಚಿವರು, ಬಬಲೇಶ್ವರ ಕ್ಷೇತ್ರದ ಶಾಸಕರೂ ಆಗಿರುವಂತಹ ಡಾ. ಎಂ. ಬಿ. ಪಾಟೀಲರ ಪರಿಕಲ್ಪನೆಯಾಗಿದೆ.

ಬಿ.ಎಲ್.ಡಿ.ಇ. ಸಂಸ್ಥೆ

1904ರಲ್ಲಿಯೇ ಹಾನಗಲ್ಲ ಕುಮಾರ ಸ್ವಾಮಿಗಳ ನೇತೃತ್ವದಲ್ಲಿ ಜರುಗಿದ ಪ್ರಥಮ ವೀರಶೈವ ಮಹಾಸಭೆಯ ಅಧಿವೇಶನದಲ್ಲಿ “ಉತ್ತರ ಕರ್ನಾಟಕ ಪ್ರದೇಶಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು” ತಲೆ ಎತ್ತಿ ನಿಲ್ಲಬೇಕೆಂಬ ನಿರ್ಣಯ ಸ್ವೀಕೃತಿಯಾಯಿತು. ಇದರನ್ವಯ 1910ರಲ್ಲಿ ಹಳಕಟ್ಟಿಯವರು ವಿಜಯಪುರದಲ್ಲಿ ಬಿ.ಎಲ್.ಡಿ.ಇ. ಸಂಸ್ಥೆಯನ್ನು ಹುಟ್ಟುಹಾಕಿದರು…
ಮುಂದೆ ಓದಿ

ಕೇಂದ್ರದ ಕುರಿತು

ಡಾ. ಫ. ಗು. ಹಳಕಟ್ಟಿಯವರ ಹೆಸರು ಶಾಶ್ವತವಾಗಿ ನೆಲೆನಿಲ್ಲುವಂತೆ ಅತ್ಯಂತ ಕೃತಜ್ಞತೆಯಿಂದ, ಶ್ರದ್ಧಾ-ಭಕ್ತಿಯಿಂದ ನಿರ್ಮಿಸಿದ ಅಪರೂಪದ ಸ್ಮಾರಕ ಭವನ. ಈ ಭವನ ಇಂದು ನಾಡಿನ ಯಾತ್ರಾ ಸ್ಥಳವಾಗಿದೆ. ಈ ಸ್ಮಾರಕ ಭವನದಲ್ಲಿ ಸಾಹಿತ್ಯಕ, ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆದುಕೊಂಡು ಬಂದಿವೆ…  ಮುಂದೆ ಓದಿ

ಇತ್ತೀಚಿನ ಸುದ್ಧಿ ಹಾಗೂ ಕಾರ್ಯಕ್ರಮಗಳು

1.50 ಕೋಟಿ ರೂಪಾಯಿಗಳು ಸರಕಾರವು ಡಾ.ಎಂ.ಎಂ.ಕಲಬುರ್ಗಿ ಸಮಗ್ರ ಸಾಹಿತ್ಯ ಪ್ರಕಟನ ಯೋಜನೆಗೆ ನೀಡಿಲಾಗಿದೆ, ಅದರಂತೆ ಸಮ್ಮೇಳನ ವಿಚಾರ ಸಂಕೀರಣ ಪ್ರಮುಖ ದಿನೋತ್ಸವ ಮತ್ತು ವಿಶೇಷ ಉಪನಾಸಗಳನ್ನು ಸಂಪನ್ಮೂಲ ವ್ಯಕ್ತಿಗಳಿಂದ ಏರ್ಪಡಿಸಲಾಗುವುದು…
ಮುಂದೆ ಓದಿ

ಡಾ. ಫ. ಗು. ಹಳಕಟ್ಟಿಯವರ ಹಸ್ತಾಕ್ಷರ

ಡಾ. ಫ. ಗು. ಹಳಕಟ್ಟಿಯವರು ಖರೀದಿಸಿದ್ದ ಮುದ್ರಣ ಯಂತ್ರ

ಡಾ. ಫ. ಗು. ಹಳಕಟ್ಟಿಯವರು ಪ್ರಕಟಿಸುತ್ತಿದ್ದ ತ್ರೈಮಾಸಿಕ

ಡಾ. ಫ. ಗು. ಹಳಕಟ್ಟಿಯವರು ಪ್ರಕಟಿಸುತ್ತಿದ್ದ ಸಾಪ್ತಾಹಿಕ

ಆದಿಲ್‍ ಶಾಹಿ ಸಾಹಿತ್ಯ ಅನುವಾದ ಯೋಜನೆ

ಆದಿಲ್‍ಶಾಹಿ ಕಾಲದ ಪರ್ಶಿಯನ್, ದಖನಿ ಮತ್ತು ಉರ್ದು ಭಾಷೆಗಳಲ್ಲಿ ರಚಿತವಾದ ಸಾಹಿತ್ಯವನ್ನು ಕನ್ನಡದಲ್ಲಿ ತರಲು ಒಂದು ಪ್ರಸ್ತಾವನೆಯನ್ನು ಕೇಂದ್ರವು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಲ್ಲಿಸಲಾಗಿತ್ತು. ಯೋಜನೆಗೆ ಇಲಾಖೆಯು ಅನುಮತಿ ನೀಡಿತು… ಮುಂದೆ ಓದಿ

ಪ್ರಶಸ್ತಿಗಳು

  • ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಮೈಸೂರು, ಶರಣ ಸಂಸ್ಕೃತಿ ಪ್ರಸಾರಕ್ಕಾಗಿ 2013ರ ‘ರಮಣಶ್ರೀ ಶರಣ ಪ್ರಶಸ್ತಿ’, ಬೆಂಗಳೂರು
  • ‘ಸೇವಾರತ್ನ’ ನಾಗನೂರು ಶ್ರೀ ರುದ್ರಾಕ್ಷಿ ಮಠ ಬೆಳಗಾವಿ- 2014 (ಶ್ರೀ ಎಸ್.ಎಸ್. ತಂಬಾಕೆ).. ಮುಂದೆ ಓದಿ

ಸಂಶೋಧನ ಕೇಂದ್ರಕ್ಕೆ ನಾಡಿನ, ಹೊರನಾಡಿನ ಮಠಾಧೀಶರು, ಹಿರಿಯ ಸಾಹಿತಿಗಳು, ಗಣ್ಯ ನಾಗರಿಕರು, ರಾಜಕೀಯ ಮುಖಂಡರು ಭೇಟಿ ನೀಡಿ. ತಮ್ಮ ಸಂದರ್ಶನದಲ್ಲಿ ಮೆಚ್ಚುಗೆಯ ವ್ಯಕ್ತಪಡಿಸಿ ಪ್ರೋತ್ಸಾಹ ಹಾಗೂ ಪ್ರೇರಣೆ ನೀಡಿದ್ದಾರೆ. ಅವರಲ್ಲಿ ಶ್ರೀ ಸುತ್ತೂರು ಮಠಾಧೀಶರು, ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು, ಶ್ರೀ ಶಿವಕುಮಾರ ಮಹಾಸ್ವಾಮಿಗಳು, ಸಿದ್ಧಗಂಗಾ ಮಠ, ತುಮಕೂರು, ಶ್ರೀ ಸಿದ್ಧರಾಮ ಮಹಾಸ್ವಾಮಿಗಳು, ರುದ್ರಾಕ್ಷಿ ಮಠ, ಬೆಳಗಾವಿ…. ಮುಂದೆ ಓದಿ